Log in
  • ಮುಖಪುಟ
  • ದೇಶಾದ್ಯಂತ ಹಿಂದಿ ಪಸರಿಸಬೇಕು ಎಂಬುದು ಕಾಂಗ್ರೆಸ್, ಗಾಂಧೀಜಿ ಕನಸಾಗಿತ್ತು

ದೇಶಾದ್ಯಂತ ಹಿಂದಿ ಪಸರಿಸಬೇಕು ಎಂಬುದು ಕಾಂಗ್ರೆಸ್, ಗಾಂಧೀಜಿ ಕನಸಾಗಿತ್ತು

ದೇಶದಲ್ಲಿ ಹಿಂದಿ ಭಾಷೆಗೆ ಉತ್ತೇಜನ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದನ್ನೇ ದೊಡ್ಡ ವಿವಾದ ಮಾಡಲಾಯಿತು. ಯಾರೂ ಮಾತೃಭಾಷೆ ಕಲಿಯಬಾರದು, ಹಿಂದಿಯೊಂದೇ ಭಾಷೆ ಎಂದು ಹೇಳದಿದ್ದರೂ ವಿವಾದವಾಯಿತು. ಆದರೆ, ಹಿಂದಿ ಭಾಷೆಯ ಉತ್ತೇಜನ ಕುರಿತು ಮಹಾತ್ಮ ಗಾಂಧೀಜಿಯವರು ಹೊಂದಿದ್ದ ನಿಲುವು, ಅದಕ್ಕೆ ಕಾಂಗ್ರೆಸ್ ನೀಡಿದ ಬೆಂಬಲ ಈಗ ಬಯಲಾಗಿದೆ.

ಹೌದು, ತಮಿಳು ಭಾಷೆ ಹಕ್ಕುಗಳ ಫೆಡರೇಷನ್ ಸಂಸ್ಥೆ ಸಹ ಸಂಚಾಲಕ ಆಝಿ ಸೆಂಥಿಲ್ ನಾಥನ್ ಈ ಕುರಿತು ಮಾಹಿತಿ ನೀಡಿದ್ದು, 1910ರಲ್ಲಿ ಹಿಂದಿ ಉತ್ತೇಜನ, ಏಳಿಗೆಗೆ ಕಾಂಗ್ರೆಸ್ ನಿರ್ಧರಿಸಿತು. ದೇಶಾದ್ಯಂತ ಹಿಂದಿಯನ್ನು ವಿಸ್ತರಿಸಬೇಕು ಎಂದೇ 1918ರಲ್ಲಿ ಚೆನ್ನೈನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸ್ಥಾಪಿಸಲಾಯಿತು ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಈ ಪ್ರಚಾರ ಸಭಾ ಸಂಸ್ಥೆಯನ್ನು ಮಹಾತ್ಮ ಗಾಂಧೀಜಿಯವರೇ ಉದ್ಘಾಟಿಸಿದ್ದು, ಕೊನೆಯ ಉಸಿರಿರುವರೆಗೂ ಅವರೇ ಅಧ್ಯಕ್ಷರಾಗಿದ್ದರು. ದೇಶಾದ್ಯಂತ ಹಿಂದಿ ಪಸರಿಸಬೇಕು ಎಂಬ ಉದ್ದೇಶ ಕಾಂಗ್ರೆಸ್ಸಿಗೆ ಮೊದಲಿನಿಂದಲೂ ಇತ್ತು ಎಂದು ಉಲ್ಲೇಖಿಸಿದ್ದಾರೆ.

ಎಲ್ಲರೂ ಹಿಂದಿ ಕಲಿಯಬೇಕು ಎಂದು ಅಮಿತ್ ಶಾ ಹೇಳಿದ್ದಕ್ಕೆ ದೇಶಾದ್ಯಂತ ಹಿಂದಿ ಹೇರಿಕೆ ಎಂದು ಹೇಳಲಾಯಿತು. ಇದಕ್ಕೆ ಕಾಂಗ್ರೆಸ್ ಸಹ ಬೆಂಬಲ ನೀಡಿತು. ಆದರೆ, ಹಿಂದಿಗೆ ಉತ್ತೇಜನ ನೀಡಲೆಂದು ಕಾಂಗ್ರೆಸ್ಸೇ ಸಂಸ್ಥೆ ಸ್ಥಾಪಿಸಿದ್ದು ಈಗ ಇತಿಹಾಸ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software