Log in
  • ಮುಖಪುಟ
  • ಅಯೋಧ್ಯೆ ವಿಚಾರದಲ್ಲಿ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಕಷ್ಟ: ಸುಪ್ರೀಂಕೋರ್ಟ್

ಅಯೋಧ್ಯೆ ವಿಚಾರದಲ್ಲಿ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಕಷ್ಟ: ಸುಪ್ರೀಂಕೋರ್ಟ್


ಅಯೋಧ್ಯೆಯ ರಾಮಮಂದಿರ ವಿಚಾರದಲ್ಲಿ ನಾವು ಹಿಂದೂಗಳ ನಂಬಿಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ರಾಮಜನ್ಮಭೂಮಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು, ನಮಗೆ ಮೆಕ್ಕಾ ಪವಿತ್ರವಾಗಿರುವಂತೆ ಹಿಂದೂಗಳಿಗೆ ಅಯೋಧ್ಯೆ ಪವಿತ್ರವಾಗಿದೆ ಎಂದು ಮುಸ್ಲಿಮರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹಾಗಾಗಿ ರಾಮಮಂದಿರ ವಿಚಾರದಲ್ಲಿ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಕಷ್ಟ ಎಂದು ತಿಳಿಸಿದೆ.

ವಿಗ್ರಹದ ದೈವತ್ವ , ನಿಖರ ರೂಪ ಹಾಗೂ ನ್ಯಾಯಶಾಸ್ತ್ರದ ವ್ಯಕ್ತಿತ ಹೊಂದಿದ್ದಾರೆಯೇ ಎಂಬುದು ಪ್ರಕರಣದ ಪ್ರಮುಖ ವಿಚಾರಣೆಗಳಲ್ಲಿ ಒಂದಾಗಿತ್ತು. ಆದರೆ ಹಲವು ಮುಸ್ಲಿಂ ಸಾಕ್ಷಿಗಳೇ ಇದಕ್ಕೆ ವಿರುದ್ಧವಾಗಿ ಮೆಕ್ಕಾ ನಮಗೆ ಪವಿತ್ರವಾಗಿರುವಂತೆ ಅಯೋಧ್ಯೆ ಹಿಂದೂಗಳಿಗೆ ಪವಿತ್ರ ಎಂದಿದ್ದಾರೆ. ಹೀಗಿರುವಾಗ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಕಷ್ಟಕರ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಹಿಂದೂಗಳಿಗೆ ಬಲ ಬಂದಂತಾಗಿದೆ. ಈಗಾಗಲೇ ನಾವು ಜಾಗ ತ್ಯಾಗಕ್ಕೆ ಸಿದ್ಧ ಎಂದು ಶಿಯಾ ವಕ್ಫ್ ಬೋರ್ಡ್ ತಿಳಿಸಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software