Log in
  • ಮುಖಪುಟ
  • ದೇಶದಲ್ಲಿ ಫ್ಲಿಪ್ ಕಾರ್ಟ್ ನೂತನ ಯೋಜನೆ, 27 ಕಿರಾಣಾ ಸ್ಟೋರ್ಸ್ ತೆರೆಯುವ ಘೋಷಣೆ
ದೇಶದಲ್ಲಿ ಫ್ಲಿಪ್ ಕಾರ್ಟ್ ನೂತನ ಯೋಜನೆ, 27 ಕಿರಾಣಾ ಸ್ಟೋರ್ಸ್ ತೆರೆಯುವ ಘೋಷಣೆ

ಭಾರತೀಯ ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಫ್ಲಿಪ್ ಕಾರ್ಟ್ ಸಂಸ್ಥೆಯು ದೇಶದ 700 ನಗರಗಳಲ್ಲಿ 27 ಸಾವಿರ ಕಿರಾಣಾ ಅಂಗಡಿಗಳನ್ನು ತೆರೆಯುವುದಾಗಿ ಘೋಷಿಸಿದೆ. ಆ ಮೂಲಕ ದೇಶದಲ್ಲಿ ವ್ಯಾಪಾರ ವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ.

ದೇಶದ ಸಣ್ಣ ಹಾಗೂ ಮಧ್ಯಮ ಶ್ರೇಣಿಯ ನಗರಗಳಲ್ಲಿ ಶಾಪಿಂಗ್ ಮಾಲ್ ಇರುವುದಿಲ್ಲ ಹಾಗೂ ಕಿರಾಣಾ ಅಂಗಡಿಗಳೇ ಜನರು ದಿನಸಿ ಖರೀದಿಗೆ ಆಧಾರವಾಗಿರುತ್ತವೆ. ಈ ದಿಸೆಯಲ್ಲಿ ದೇಶಾದ್ಯಂತ ಕಿರಾಣಾ ಅಂಗಡಿಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.

ಅಷ್ಟೇ ಅಲ್ಲ, 2 ಟೈರ್ ಹಾಗೂ 3 ಟೈರ್ ಶ್ರೇಣಿಯ ನಗರಗಳಲ್ಲೂ ಕಿರಾಣಾ ಅಂಗಡಿಗಳನ್ನು ಸ್ಥಾಪಿಸಲಾಗುವುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಕಿರಾಣಾ ಅಂಗಡಿಗಳು ಪ್ರಾಬಲ್ಯ ಸಾಧಿಸಿದ್ದು, ಇದನ್ನು ಮನಗಂಡು ಭಾರತದಾದ್ಯಂತ ಈ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದೆ.

ಆದಾಗ್ಯೂ, ದಿನಸಿ ವಸ್ತುಗಳನ್ನು ಸಹ ಕಿರಾಣಾ ಅಂಗಡಿಗಳ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software