Log in
  • ಮುಖಪುಟ
  • ಗಡಿಯಲ್ಲಿ ಪಾಕಿಸ್ತಾನಿ ಉಗ್ರರಿಗೆ ಸೇನೆ ಪಾಠ, ಪಿಒಕೆ ಉಗ್ರರ ನೆಲೆಗಳು ಉಡೀಸ್

ಗಡಿಯಲ್ಲಿ ಪಾಕಿಸ್ತಾನಿ ಉಗ್ರರಿಗೆ ಸೇನೆ ಪಾಠ, ಪಿಒಕೆ ಉಗ್ರರ ನೆಲೆಗಳು ಉಡೀಸ್

ಗಡಿಯಲ್ಲಿ ಪಾಕಿಸ್ತಾನಿ ಉಗ್ರರು, ಸೈನಿಕರು ಏನೇ ಉಪಟಳ ಮಾಡಲಿ, ಭಾರತೀಯ ಸೈನಿಕರು ಮಾತ್ರ ಅವರನ್ನು ಹಿಮ್ಮೆಟ್ಟಿಸುತ್ತಾರೆ. ಅದರಲ್ಲೂ ಕಳೆದ ಹಲವು ದಿನಗಳಿಂದ ಗಡಿಯಲ್ಲಿ ಉಗ್ರರನ್ನು ಛೂ ಬಿಟ್ಟಿರುವ ಪಾಕಿಸ್ತಾನಕ್ಕೆ ಈಗ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದು, ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನವು ನೂರಾರು ಉಗ್ರರನ್ನು ಕಳುಹಿಸಿದ್ದು, ಅಲ್ಲಿ ನೆಲೆಗಳನ್ನು ಸ್ಥಾಪಿಸಲಾಗಿದೆ. ಈ ನೆಲೆಗಳು ಪಿಒಕೆಯ ಗ್ರಾಮಗಳಲ್ಲಿದ್ದು, ಇವುಗಳ ಮೂಲಕವೇ ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ, ಇಲ್ಲಿ ಉಗ್ರ ಕೃತ್ಯ ಎಸಗಲು, ಸೇನೆ, ನಾಗರಿಕರ ಮೇಲೆ ಗುಂಡಿನ ದಾಳಿ ಸಂಚು ರೂಪಿಸಲಾಗುತ್ತಿತ್ತು. ಇದನ್ನು ಮನಗಂಡ ಭಾರತೀಯ ಸೈನಿಕರು ದಾಳಿ ಮೂಲಕ ಹಲವು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಪಿಒಕೆ ಸೇರಿ ಜಮ್ಮು-ಕಾಶ್ಮೀರದ ಹಲವು ಗಡಿಗಳಲ್ಲಿ ಉಗ್ರರ ನೆಲೆಗಳನ್ನು ಸ್ಥಾಪಿಸಲಾಗಿದೆ. ಗುಜರಾತ್ ಮೂಲಕ ಭಾರತದೊಳಕ್ಕೆ ಪ್ರವೇಶಿಸಿ ದಕ್ಷಿಣ ಭಾರತದ ಹಲವು ಪ್ರದೇಶಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಭಾರತೀಯ ಸೇನೆಯು ಗಡಿಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಂಡಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software