Log in
  • ಮುಖಪುಟ
  • ನರೇಂದ್ರ ಮೋದಿ ನಾಯಕತ್ವದ ಮೇಲೆ ಯಾವ ದೇಶದವರಿಗೆ ಎಷ್ಟು ನಂಬಿಕೆ ಇದೆ ಗೊತ್ತಾ?

ನರೇಂದ್ರ ಮೋದಿ ನಾಯಕತ್ವದ ಮೇಲೆ ಯಾವ ದೇಶದವರಿಗೆ ಎಷ್ಟು ನಂಬಿಕೆ ಇದೆ ಗೊತ್ತಾ?

ನರೇಂದ್ರ ಮೋದಿ ಅವರು ಪ್ರಧಾನಿಯಾದ ಈ 5 ವರ್ಷದಲ್ಲಿ ಅವರು ಭಾರತದ ನಾಯಕರಾಗಿ ಮಾತ್ರ ಉಳಿದಿಲ್ಲ. ಜಾಗತಿಕ ನಾಯಕರಾಗಿ ಬೆಳೆದಿದ್ದಾರೆ. ವಿಶ್ವದ ಬಹುತೇಕ ದೇಶಗಳೊಂದಿಗೆ ಉತ್ತಮ ಸಂಬಂಧ, ಪರಿಸರ ರಕ್ಷಣೆ ವಿಷಯದಲ್ಲಿ ವಹಿಸಿದ ನಾಯಕತ್ವ, ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತುವಲ್ಲಿ ಮುಂಚೂಣಿಯಲ್ಲಿರುವುದು ಸೇರಿ ಹಲವು ವಿಷಯಗಳಲ್ಲಿ ಮೋದಿ ಜಾಗತಿಕ ನಾಯಕರಾಗಿದ್ದಾರೆ.

ಇದೇ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸ್ಪೆಕ್ಟೇಟರ್ ಇಂಡೆಕ್ಸ್ ಎಂಬ ಸಂಸ್ಥೆಯು ಮೋದಿ ಅವರ ನಾಯಕತ್ವದ ಮೇಲೆ ಯಾವ ರಾಷ್ಟ್ರದವರು, ಎಷ್ಟು ನಂಬಿಕೆ ಹೊಂದಿದ್ದಾರೆ ಎಂಬ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಪ್ರಕಾರ ಶೇ.65ರಷ್ಟು ಭಾರತೀಯರು ಮೋದಿ ಅವರ ನಾಯಕತ್ವ ಮೆಚ್ಚಿದ್ದರೆ, ಶೇ.44ರಷ್ಟು ರಷ್ಯಾ, ಶೇ.40ರಷ್ಟು ಜಪಾನ್, ಶೇ.36ರಷ್ಟು ಬ್ರಿಟನ್ ಹಾಗೂ ಇಟಲಿ, ಶೇ.33ರಷ್ಟು ನೈಜೀರಿಯಾ ಜನ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ.

ಅಷ್ಟೇ ಅಲ್ಲ, ಶೇ.32ರಷ್ಟು ಮೆಕ್ಸಿಕೋ, ಕೆನಡಾ, ಶೇ.27ರಷ್ಟು ಅಮೆರಿಕ, ಶೇ.26ರಷ್ಟು ಜರ್ಮನಿ, ಶೇ.25ರಷ್ಟು ಫ್ರಾನ್ಸ್, ಶೇ. 17ರಷ್ಟು ದಕ್ಷಿಣ ಆಫ್ರಿಕಾ ಹಾಗೂ ಸೌದಿ ಅರೇಬಿಯಾದ ಜನರು ಮೋದಿಯೇ ಉತ್ತಮ ನಾಯಕ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software