Log in
  • ಮುಖಪುಟ
  • ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ, ಆ ದೇಶದಲ್ಲಿ ನಾವು ಆಡಲ್ಲ ಎಂದ ಲಂಕಾ ಕ್ರಿಕೆಟಿಗರು

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ, ಆ ದೇಶದಲ್ಲಿ ನಾವು ಆಡಲ್ಲ ಎಂದ ಲಂಕಾ ಕ್ರಿಕೆಟಿಗರು

ಪಾಕಿಸ್ತಾನವು ಇಡೀ ವಿಶ್ವದಲ್ಲೇ ಹೆಚ್ಚು ಉಗ್ರರನ್ನು ಒಡಲಲ್ಲಿ ಇಟ್ಟುಕೊಂಡು ಸಾಕುತ್ತಿದೆ, ಈ ಕುರಿತು ಯಾರು ಹೇಳಿದರೂ ಕೇಳದೆ ಲಜ್ಜೆಬಿಟ್ಟು ಉಗ್ರರ ಪೋಷಣೆ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲಿ, ಇದೇ ವಿಷಯದ ಕುರಿತು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ.

ಉಗ್ರ ಪೋಷಣೆ ಮಾಡುವ ಪಾಕಿಸ್ತಾನದಲ್ಲಿ ಭದ್ರತೆಯ ಕೊರತೆಯಿದ್ದು, ನಾವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂದು ಶ್ರೀಲಂಕಾದ 10 ಆಟಗಾರರು ಘೋಷಿಸಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ವೇಗಿ ಲಸಿತ್ ಮಾಲಿಂಗ, ದಿಮುತ್ ಕರುಣರತ್ನೆ, ಏಂಜೆಲೋ ಮ್ಯಾಥ್ಯೂಸ್ ಸೇರಿ 10 ಆಟಗಾರರು, ನಮಗೆ ಪಾಕಿಸ್ತಾನದಲ್ಲಿ ಆಡಲು ಭದ್ರತೆ ಕೊರತೆ ಇದೆ. ಹೀಗಾಗಿ ನಾವು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಘೋಷಿಸಿದ್ದಾರೆ.

ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲು ಶ್ರೀಲಂಕಾ ಆಟಗಾರರು ಪಾಕಿಸ್ತಾನಕ್ಕೆ ತೆರಳಬೇಕಿದ್ದು, ಸೆಪ್ಟೆಂಬರ್ 27ರಿಂದ ಅಕ್ಟೋಬರ್ 9ರವರೆಗೆ ಪಂದ್ಯಗಳು ನಡೆಯಲಿವೆ. ಆದರೆ, ಭದ್ರತೆ ಕಾರಣದಿಂದ ಆಟಗಾರರು ಆಡಲ್ಲ ಎಂದಿದ್ದು, ಸರಣಿಯೇ ರದ್ದಾಗುವ ಸಾಧ್ಯತೆಯಿದೆ. 2009ರಲ್ಲಿ ಲಾಹೋರ್ ಬಳಿ ಶ್ರೀಲಂಕಾ ಆಟಗಾರರು ತೆರಳುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software