Log in
  • ಮುಖಪುಟ
  • ಬೆಳಗಾವಿ-ಬೆಂಗಳೂರು ಸಂಚರಿಸುವವರಿಗೆ ಸಿಹಿ ಸುದ್ದಿ, ಇಂಡಿಗೋ ಏರ್ ಲೈನ್ಸ್ ಸೇವೆ ಆರಂಭ

ಬೆಳಗಾವಿ-ಬೆಂಗಳೂರು ಸಂಚರಿಸುವವರಿಗೆ ಸಿಹಿ ಸುದ್ದಿ, ಇಂಡಿಗೋ ಏರ್ ಲೈನ್ಸ್ ಸೇವೆ ಆರಂಭ


ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಕುಂದಾನಗರಿ ಬೆಳಗಾಗಿವೆ ವಿಮಾನದಲ್ಲಿ ಸಂಚರಿಸುವವರಿಗೆ ಸಹಿಸುದ್ದಿ ಸಿಕ್ಕಿದ್ದು, ದಕ್ಷಿಣ ಭಾರತದಲ್ಲಿ ಸಂಪರ್ಕ ಬಲಪಡಿಸುವ ಉದ್ದೇಶದೊಂದಿಗೆ ಭಾರತದ ಪ್ರಮುಖ ಖಾಸಗಿ ವಿಮಾನಯಾನ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ಬೆಳಗಾವಿ ಮತ್ತು ಬೆಂಗಳೂರು ನಡುವೆ ಸೇವೆ ಆರಂಭಿಸಿದೆ.

ಹೊಸ ಮಾರ್ಗದಲ್ಲಿ ಎಟಿಆರ್ -18 ವಿಮಾನ ಸಂಚರಿಸಲಿದೆ. ಬೆಳಗಾವಿ ಇಂಡಿಗೋನ 58 ನೇ ದೇಶೀಯ ಮಾರ್ಗವಾಗಿದ್ದು, ಒಟ್ಟಾರೆ 77 ನೇ ಸ್ಥಳವಾಗಿದೆ.

ಬೆಂಗಳೂರು ಮತ್ತು ಮಧುರೈ ನಡುವೆ ಹೆಚ್ಚುವರಿ ವಿಮಾನಗಳ ಸೇವೆಯ ಜೊತೆಗೆ ಬೆಳಗಾವಿಯನ್ನು ಹೊಸ ದೇಶೀಯ ಮಾರ್ಗವಾಗಿ ಘೋಷಸಿಸುತ್ತಿರುವುದಕ್ಕೆ ನಾವು ಹರ್ಷಪಡುತ್ತಿದ್ದೇವೆ. ಬೆಳಗಾವಿಯು ಹೆಚ್ಚು ಐತಿಹಾಸಿಕ ಮಹತ್ವ ಮತ್ತು ಪ್ರಕೃತಿ ಪ್ರವಾಸೋದ್ಯಮದಿಂದ ಕೂಡಿರುವುದರಿಂದ ರಾಜ್ಯದ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅವಕಾಶಗಳನ್ನು ಒದಗಿಸಿಕೊಡಲಿದೆ ಎಂದು ಇಂಡಿಗೋ ಮುಖ್ಯ ವಾಣಿಜ್ಯ ಅಧಿಕಾರಿ ವಿಲಿಯಂ ಬೌಲ್ಟರ್ ಮಾಹಿತಿ ನೀಡಿದ್ದಾರೆ.

ಈ ವಿಮಾನಗಳು ಬೆಂಗಳೂರಿನಿಂದ ಹೊರಗೆ ಎರಡನೇ ದರ್ಜೆಯ ನಗರಗಳೊಂದಿಗೆ ಸಂಪರ್ಕ ಬಲಪಡಿಸುತ್ತವೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ಸಂಚಾರ ವೃದ್ಧಿಸುತ್ತವೆ. ವಲಯ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ವಿಸ್ತರಣೆ ಮುಂದುವರಿಸಲಿದೆ. ಆರಾಮದಾಯಕ ಮತ್ತು ತೊಂದರೆ ರಹಿತ ಹಾಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವುದಕ್ಕೆ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software