Log in
  • ಮುಖಪುಟ
  • ಡೋರಿಯನ್ ಚಂಡಮಾರುತಕ್ಕೆ ಬಹಾಮಾಸ್ ಜನರ ಬದುಕೇ ಸರ್ವನಾಶ: ನೆರವಿಗೆ ನಿಂತ ಭಾರತ

ಡೋರಿಯನ್ ಚಂಡಮಾರುತಕ್ಕೆ ಬಹಾಮಾಸ್ ಜನರ ಬದುಕೇ ಸರ್ವನಾಶ: ನೆರವಿಗೆ ನಿಂತ ಭಾರತ

ಹಿಂದೆಂದು ಕಂಡು ಕೇಳಯರಿದಂತ ಡೋರಿಯನ್ ಚಂಡಮಾರುತ ಹೊಡೆತಕ್ಕೆ ಸಿಲುಕಿ ದ್ವೀಪರಾಷ್ಟ್ರ ಬಹಾಮಾಸ್ ನಲುಗುತ್ತಿದೆ.ಈ ವರೆಗೆ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ತುತ್ತು ಅನ್ನಕ್ಕೂ ಜನರು ಪರದಾಡುತ್ತಿದ್ದಾರೆ. ಬಹಾಮಾಸ್ ನ ಅಬಾಕೋ ದ್ವೀಪ ಸರ್ವನಾಶವಾಗಿದ್ದು, 500ಕ್ಕೂ ಹೆಚ್ಚು ಬರಿಗೈಯಲ್ಲಿ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ ಬಹಾಮಾಸ್ ದೇಶಕ್ಕೆ ಭಾರತ ನೆರವಿಗೆ ಬಂದಿದ್ದು, ಮಾನವೀಯ ನೆರವಾಗಿ ಒಂದು ಮಿಲಿಯನ್ ಯುಎಸ್ ಡಾಲರ್ ಅನುದಾನ ಘೋಷಣೆ ಮಾಡಿದೆ.

ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಹಾಮಾಸ್ ಜನರ ಕಷ್ಟ ಸಮಯದಲ್ಲಿ ಬೆಂಬಲವಾಗಿ ಭಾರತೀಯರು ಎಂದಿಗೂ ನಿಲ್ಲುತ್ತಾರೆ. ಡೋರಿಯನ್ ಚಂಡಮಾರುತದಿಂದಾಗಿ ಬಹಾಮಾಸ್ ನಲ್ಲಿ ಉಂಟಾದ ಸಾವು- ನೋವಿಗೆ ಭಾರತೀಯರು ದು:ಖಿತರಾಗಿದ್ದಾರೆ. ಹೀಗಾಗಿ ಬಹಾಮಾಸ್ ಜನರ ನೆರವಿಗಾಗಿ ಒಂದು ಮಿಲಿಯನ್ ಯುಎಸ್ ಡಾಲರ್ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಡೋರಿಯನ್ ಚಂಡಮಾರುತದಿಂದಾಗಿ ಇಡೀ ಬಹಾಮಾಸ್ ದ್ವೀಪ ರಾಷ್ಟ್ರವೂ ಅಕ್ಷರಶ: ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ನಿತ್ಯವೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸಾವಿರಾರು ಜನರು ಮನೆ, ಮಠ, ಕುಟುಂಬವನ್ನು ಕಳೆದು ಬೀದಿಯಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ಭಾರತ ತಕ್ಷಣವೇ ಬಹಾಮಾಸ್ ಜನರ ಕಷ್ಟಕ್ಕೆ ಸ್ಪಂದಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software