Log in
  • ಮುಖಪುಟ
  • ಕೇಂದ್ರ ಸರ್ಕಾರದ ಕ್ರಮ ಹಿನ್ನೆಲೆ, ಬಾಂಗ್ಲಾದೇಶಕ್ಕೆ ಅಕ್ರಮ ಗೋ ಸಾಗಣೆ ಶೇ.96 ಇಳಿಕೆ

ಕೇಂದ್ರ ಸರ್ಕಾರದ ಕ್ರಮ ಹಿನ್ನೆಲೆ, ಬಾಂಗ್ಲಾದೇಶಕ್ಕೆ ಅಕ್ರಮ ಗೋ ಸಾಗಣೆ ಶೇ.96 ಇಳಿಕೆ


ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗಡಿಯಲ್ಲಿ ಅಕ್ರಮ ಚಟುವಟಿಕೆ, ನಕಲಿ ನೋಟುಗಳ ಹಾವಳಿ, ಉಗ್ರರ ನಿಗ್ರಹ ಜತೆಗೆ ಗೋವುಗಳ ಅಕ್ರಮ ಸಾಗಣೆಯನ್ನೂ ತಡೆಯಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಭಾರತದಿಂದ ಬಾಂಗ್ಲಾದೇಶಕ್ಕೆ ಗೋವುಗಳ ಅಕ್ರಮ ಸಾಗಣೆ ಪ್ರಮಾಣ ಈಗ ಶೇ.96ರಷ್ಟು ಕುಸಿದಿದೆ ಎಂದು ಬಾಂಗ್ಲಾದೇಶವೇ ತಿಳಿಸಿದೆ.

ಬಾಂಗ್ಲಾದೇಶದಲ್ಲಿ ನಡೆದ ಸಭೆಯೊಂದರಲ್ಲಿ ಸಚಿವ ಅಶ್ರಫ್ ಅಲಿಯು ಈ ಕುರಿತು ಮಾಹಿತಿ ನೀಡಿದ್ದು, ಭಾರತದಿಂದ ಗೋವುಗಳ ಅಕ್ರಮ ಸಾಗಣೆ ಕಡಿಮೆಯಾಗಿದೆ. ಹಾಗಾಗಿ ನಾವು ಮಾಂಸ ಸ್ವಾವಲಂಬನೆ ಸಾಧಿಸಬೇಕು ಎಂಬುದಾಗಿ ಕರೆ ನೀಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಭಾರತ ಮತ್ತು ಮ್ಯಾನ್ಮಾರ್ನಿಂದ ಗೋವುಗಳ ಕಳ್ಳಸಾಗಣೆಯೂ ಬಹುತೇಕ ಕೊನೆಯಾಗಿದೆ.ಈ ಹಿಂದೆ ಭಾರತದಿಂದ ವರ್ಷಕ್ಕೆ 24-25ಲಕ್ಷ ಗೋವುಗಳನ್ನು ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಸಾಗಣೆ ಮಾಡಲಾಗುತ್ತಿತ್ತು. 2018ರಲ್ಲಿ ಇದು ಕೇವಲ 92ಸಾವಿರಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಮಮತಾ ಬ್ಯಾನರ್ಜಿ ನಾಡಿನಿಂದ ಬಾಂಗ್ಲಾದೇಶಕ್ಕೆ ಗೋವುಗಳ ಅಕ್ರಮ ಸಾಗಣೆ ಕಡಿಮೆಯಾಗಿರುವುದು ಸಂತಸದ ವಿಷಯವಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software