Log in
  • ಮುಖಪುಟ
  • ದೇಶದಲ್ಲೇ ಮೊದಲಿಗೆ ರೈಲುಗಳಿಗೂ ರಕ್ಷಣಾ ಸಿಬ್ಬಂದಿ ನಿಯೋಜನೆ, ಕೇಂದ್ರದ ಮಹತ್ತರ ಯೋಜನೆ

ದೇಶದಲ್ಲೇ ಮೊದಲಿಗೆ ರೈಲುಗಳಿಗೂ ರಕ್ಷಣಾ ಸಿಬ್ಬಂದಿ ನಿಯೋಜನೆ, ಕೇಂದ್ರದ ಮಹತ್ತರ ಯೋಜನೆ


ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರೈಲ್ವೆ ಇಲಾಖೆಯಲ್ಲಿ ಗಣನೀಯ ಸುಧಾರಣೆಯಾಗಿವೆ. ಇದರ ದಿಸೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಯೋಜನೆ ಜಾರಿಗೆ ತಂದಿದ್ದು, ದೇಶದಲ್ಲೇ ಮೊದಲ ಬಾರಿಗೆ ಇನ್ನು ಮುಂದೆ ರೈಲುಗಳ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈಶಾನ್ಯ ರಾಜ್ಯಗಳಂತಹ ನಕ್ಸಲ್ ಪೀಡಿತ ರಾಜ್ಯಗಳಲ್ಲಿ, ಜಮ್ಮು-ಕಾಶ್ಮೀರದಲ್ಲಿ ರೈಲ್ವೆ, ರೈಲು ಮಾರ್ಗ, ಪ್ರಯಾಣಿಕರ ರಕ್ಷಣೆ ದಿಸೆಯಲ್ಲಿ ಕಮಾಂಡೋ ಫಾರ್ ರೈಲ್ವೆ ಸೆಕ್ಯುರಿಟಿ (ಕೋರಸ್) ಸಿಬ್ಬಂದಿ ರಚಿಸಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ರೈಲ್ವೆ ರಕ್ಷಣಾ ಪಡೆಗೆ ಸುಮಾರು 1200 ಸಿಬ್ಬಂದಿ ಸೇರಲಿದ್ದು, ಇವರು ಆಧುನಿಕ ಶಸ್ತ್ರಾಸ್ತ್ರ ಹೊಂದಿರುತ್ತಾರೆ. ರೈಲ್ವೆ ಹಳಿ ಧ್ವಂಸಗೊಳಿಸುವುದು, ರೈಲ್ವೆ ಮೇಲೆ ದಾಳಿ ಮಾಡುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದು ಸೇರಿ ಯಾವುದೇ ಅಪಾಯದ ಸಂದರ್ಭದಲ್ಲಿ ನೆರವಿಗೆ ಬರುತ್ತಾರೆ. ಇವರು ಸಹ ರೈಲಿನಲ್ಲಿಯೇ ಸಂಚರಿಸುವುದರಿಂದ ರೈಲಿಗೆ ನಕ್ಸಲ್ ಪೀಡಿತ, ಉಗ್ರರ ದಾಳಿ ಭೀತಿ ಇರುವ ರಾಜ್ಯಗಳಲ್ಲಿ ಅನುಕೂಲವಾಗಲಿದೆ.

ಉತ್ತರಾಖಂಡ, ಛತ್ತೀಸ್ ಗಢ ಸೇರಿ ಹಲವು ರಾಜ್ಯಗಳಲ್ಲಿ ನಕ್ಸಲರ ಭೀತಿ ಇರುವುದರಿಂದ ಕೇಂದ್ರ ಸರ್ಕಾರದ ಈ ಯೋಜನೆಯು ಉತ್ತಮವಾಗಿದೆ. ಪ್ರಯಾಣಿಕರು ಇನ್ನು ಯಾವುದೇ ಭೀತಿ ಇಲ್ಲದೆ ಸಂಚರಿಸಬಹುದಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software