Log in
  • ಮುಖಪುಟ
  • ಶೀಘ್ರದಲ್ಲೇ ಎಚ್‍ಎಎಲ್‍ಗೆ ಸಿಗಲಿದೆ 59,000 ಕೋಟಿಯ ಲಘು ಯುದ್ಧ ವಿಮಾನಗಳ ನಿರ್ಮಾಣಕ್ಕೆ ಅನುಮೋದನೆ

ಶೀಘ್ರದಲ್ಲೇ ಎಚ್‍ಎಎಲ್‍ಗೆ ಸಿಗಲಿದೆ 59,000 ಕೋಟಿಯ ಲಘು ಯುದ್ಧ ವಿಮಾನಗಳ ನಿರ್ಮಾಣಕ್ಕೆ ಅನುಮೋದನೆ

ಎಚ್‍ಎಎಲ್ ಯುದ್ಧ ವಿಮಾನಗಳ ನಿರ್ಮಾಣ ಮಾಡುವ ಸಾಮರ್ಥ್ಯವಿದ್ದರೂ ರಫೆಲ್‍ಗೆ ಯುದ್ಧ ವಿಮಾನ ತಯಾರಿಕೆ ಅನುಮೋದನೆ ನೀಡಲಾಗಿದೆ ಎಂದು ಅರಚಾಟ ನಡೆಸಿದ್ದ ಕಾಂಗ್ರೆಸ್ ನಾಯಕರು ಇಂಥ ಸುದ್ದಿಗಳನ್ನು ನೋಡಲ್ಲ, ನೋಡಿದರೂ ಈ ಬಗ್ಗೆ ಮಾತಾಡಲ್ಲ, ಯಾಕೆಂದರೆ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲೂ ರಾಜಕೀಯವೇ ಮುಖ್ಯ. 59 ಸಾವಿರ ಕೋಟಿ ಮೌಲ್ಯದ 83 ಕ್ಕೂ ಹೆಚ್ಚು ತೇಜಸ್ ತಯಾರಿಕೆಗೆ ಶೀಘ್ರದಲ್ಲೇ ಐಎಎಫ್ ಅನುಮೋದನೆ ನೀಡಲಿದೆ ಎನ್ನಲಾಗುತ್ತಿದೆ.

ಎಚ್‍ಎಎಲ್ ಸಿಎಂಡಿ ಆರ್. ಮಾಧವನ್ ಹೇಳುವ ಪ್ರಕಾರ, ಎಚ್‍ಎಎಲ್‍ನ ಬೆಂಗಳೂರು ಘಟಕದಿಂದ 16 ಲಘು ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. 59 ಸಾವಿರ ಕೋಟಿ ಮೌಲ್ಯದ 83 ವಿಮಾನಗಳ ತಯಾರಿಕೆಗಾಗಿ ಐಎಎಫ್ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಎಚ್‍ಎಎಲ್ ಈಗಾಗಲೇ ತಯಾರಿಸಿದ 20 ತೇಜಸ್ ಲಘು ಯುದ್ಧ ವಿಮಾನಗಳನ್ನು ಐಎಎಫ್‍ಗೆ ನೀಡಿದ್ದು, ಐಎಎಫ್ ಕಾನ್ಫಿಗರೇಷನ್ ಪ್ರಕಾರ ತಯಾರಿಸಲಿರುವ ಮೊದಲ ಲಘು ಯುದ್ಧ ವಿಮಾನವನ್ನು ಡಿಸೆಂಬರ್ ವೇಳೆಗೆ ಪೂರೈಸಲಿದೆ ಎನ್ನಲಾಗುತ್ತಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software