Log in
  • ಮುಖಪುಟ
  • ಪ್ರಶ್ನೆ ಕೇಳಿದ್ದೆ ತಪ್ಪಾ..?: ಪ್ರಿಯಾಂಕ್ ಎದುರೇ ಆಪ್ತ ಸಹಾಯಕನಿಂದ ಪತ್ರಕರ್ತನಿಗೆ ಧಮ್ಕಿ..!

ಪ್ರಶ್ನೆ ಕೇಳಿದ್ದೆ ತಪ್ಪಾ..?: ಪ್ರಿಯಾಂಕ್ ಎದುರೇ ಆಪ್ತ ಸಹಾಯಕನಿಂದ ಪತ್ರಕರ್ತನಿಗೆ ಧಮ್ಕಿ..!


ಉತ್ತರ ಪ್ರದೇಶಕ್ಕೆ ಇಂದು ಭೇಟಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ 370 ವಿಧಿ ರದ್ದು ಸಂವಿಧಾನ ವಿರೋಧಿ ಎಂದಿದ್ದರು. ಈ ಬಗ್ಗೆ ಎಬಿಪಿ ಗಂಗಾ ವಾಹಿನಿ ವರದಿಗಾರ ನಿತೀಶ್ ಪಾಂಡೆ 370 ವಿಧಿ ರದ್ದು ಕುರಿತು ಪ್ರಶ್ನೆ ಕೇಳಲು ಮುಂದಾದಾಗ ಅಲ್ಲೇ ಇದ್ದ ಪ್ರಿಯಾಂಕ್ ಆಪ್ತ ಸಹಾಯಕ ಸಂದೀಪ್ ಸಿಂಗ್ ಜಾಸ್ತಿ ಗದ್ದಲ ಮಾಡಿದರೆ ಸರಿಯಿರಲ್ಲ, ಇಲ್ಲೇ ಹಿಗ್ಗಾಮುಗ್ಗಾ ಬಾರಿಸಬೇಕಾಗುತ್ತೆ. ಸಾಕು ನಿಲ್ಲಿಸು, ಕ್ಯಾಮೆರಾ ಬಂದ್ ಮಾಡು ಎಂದು ತಳ್ಳಾಟ, ನೂಕಾಟ ನಡೆಸಿ, ಹಲ್ಲೆಗೆ ಮುಂದಾಗಿ ನಿಂದನೆ ಮಾಡಿದ್ದಾನೆ.

ಒಬ್ಬ ಪತ್ರಕರ್ತ ಮೇಲೆ ಪ್ರಿಯಾಂಕ್ ಆಪ್ತ ಸಂದೀಪ್ ಸಿಂಗ್ ಇಷ್ಟೆಲ್ಲಾ ಗೂಂಡಾಗಿರಿ ಮಾಡುತ್ತಿದ್ದರೂ, ಸ್ಥಳದಲ್ಲೇ ಇದ್ದ ಪ್ರಿಯಾಂಕ್ ಮಾತ್ರ ಏನು ಹೇಳಲಿಲ್ಲ. ಆಗ ಪತ್ರಕರ್ತ ನಿತೀಶ್ ಪಾಂಡೆ, ಪ್ರಿಯಾಂಕ್ ಜೀ ನಿಮ್ಮ ಆಪ್ತ ಸಹಾಯಕನ ಆರ್ಭಟ ನೋಡಿ ಹೇಗೆ ಹಲ್ಲೆಗೆ ಮುಂದಾಗಿದ್ದಾರೆ. ನಿಮ್ಮೆದುರೇ ಧಮ್ಕಿ ಕೊಟ್ಟರೂ, ನೀವೇನು ಮಾತಾಡುತ್ತಿಲ್ಲ ಎಂದು ಕೇಳಿದರೂ ಪ್ರಿಯಾಂಕಾ ಮಾತ್ರ ಮರು ಮಾತಾಡದೇ ಸ್ಥಳದಿಂದ ಕಾಲ್ಕಿತ್ತರು.

ಕಾಂಗ್ರೆಸ್ ಪಾಲಿಗೆ ಧಮ್ಕಿ ಹಾಕೋದು ಹೊಸದೇನಲ್ಲ. ಆದರೆ ಪತ್ರಕರ್ತ ನಿತೀಶ್ ಪಾಂಡೆ ಪ್ರಶ್ನೆ ಕೇಳಿದ್ದೆ ತಪ್ಪಾ..? ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕ ಸಂದೀಪ್ ಸಿಂಗ್, ಜೆಎನ್‍ಯು ಮಾಜಿ ವಿದ್ಯಾರ್ಥಿ. ಈತ ಒಬ್ಬ ಪತ್ರಕರ್ತನ ಮೇಲೆ ಧಮ್ಕಿ ಹಾಕಿ, ಹಲ್ಲೆಗೆ ಮುಂದಾದರೂ ಬಾಯಿ ಬಿಡದ ಪ್ರಿಯಾಂಕಾ ಜನರಿಗೆ ಏನು ನ್ಯಾಯ ಕೊಡಿಸ್ತಾರೆ ಎಂದು ಸ್ಥಳೀಯರು ಮಾತಲಾರಂಭಿಸಿದ್ದಾರೆ ಎನ್ನಲಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software