Log in
  • ಮುಖಪುಟ
  • ಕನ್ನಡದ ಖ್ಯಾತ ನಟ ಕೋಮಲ್ ಮೇಲೆ ಯುವಕರ ತಂಡವೊಂದು ಹಲ್ಲೆ
ಕನ್ನಡದ ಖ್ಯಾತ ನಟ ಕೋಮಲ್ ಮೇಲೆ ಯುವಕರ ತಂಡವೊಂದು ಹಲ್ಲೆ

ಕನ್ನಡದ ಖ್ಯಾತ ನಟ ಕೋಮಲ್ ಮೇಲೆ ಯುವಕರ ತಂಡವೊಂದು ಏಕಾಏಕಿ ಹಲ್ಲೆ ನಡೆಸಿ, ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಂತ್ರಿ ಮಾಲ್ ಬಳಿ ಕೋಮಲ್ ಕಾರು ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಯುವಕರ ತಂಡವೊಂದು ಕೋಮಲ್ ಮೇಲೆ ನಡೆಸಿದೆ ಎನ್ನಲಾಗಿದೆ. ಕೋಮಲ್ ಮುಖಕ್ಕೆ ಗಂಭೀರ ಗಾಯಗೊಂಡಿದ್ದು, ಈ ಬಗ್ಗೆ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.

ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಟ ಕೋಮಲ್, ನಾನು ಮಗಳನ್ನು ಟ್ಯೂಷನ್ ಬಿಡಲು ಹೊರಟಿದ್ದೆ. ಆಗ ಮಂತ್ರಿ ಮಾಲ್ ಏಕಾಏಕಿ ನಾಲ್ವರ ಗುಂಪೊಂದು ಏಕಾಏಕಿ ನನ್ನ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software