Log in
  • ಮುಖಪುಟ
  • ಪಾಕಿಸ್ತಾನ ಹಾಗೂ ಕಾಶ್ಮೀರ ಎಂದೆಂದಿಗೂ ಹಿಂದುಭೂಮಿಯೇ: ಪಾಕ್‍ಗೆ ಮುಸ್ಲಿಂ ವಿದ್ವಾಂಸ್ ಟಾಂಗ್
ಪಾಕಿಸ್ತಾನ ಹಾಗೂ ಕಾಶ್ಮೀರ ಎಂದೆಂದಿಗೂ ಹಿಂದುಭೂಮಿಯೇ: ಪಾಕ್‍ಗೆ ಮುಸ್ಲಿಂ ವಿದ್ವಾಂಸ್ ಟಾಂಗ್

370 ವಿಧಿ ರದ್ದು ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ಹಿಡಿದು ಭಾರತದ ವಿರುದ್ಧ ಅರಚಾಟ ನಡೆಸಿರುವ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ಮೂಲದ ಮುಸ್ಲಿಂ ವಿದ್ವಾಂಸ ಇಮಾಮ್ ಮಹಮ್ಮದ್ ತಾವ್ಹಿದಿ, ಕಾಶ್ಮೀರ ಪಾಕಿಸ್ತಾನ ಭಾಗವಲ್ಲ, ಎಂದೆಂದಿಗೂ ಪಾಕಿಸ್ತಾನದ ಭಾಗವಾಗಲ್ಲ. ಪಾಕಿಸ್ತಾನ ಹಾಗೂ ಕಾಶ್ಮೀರ ಎಂದೆಂದಿಗೂ ಹಿಂದುಭೂಮಿಯೇ ಎಂದು ಗುಡುಗಿದ್ದಾರೆ.

ಪಾಕಿಸ್ತಾನ ಹಾಗೂ ಕಾಶ್ಮೀರ ಈ ಭಾಗವೂ ಭಾರತದ ಭಾಗವೇ ಆಗಿತ್ತು. ಕಾಶ್ಮೀರ ಯಾವತ್ತೂ ಪಾಕಿಸ್ತಾನದ ಭಾಗವಾಗಲ್ಲ. ಮುಸ್ಲಿಮರು ಹಿಂದೂಗಳನ್ನು ಮತಾಂತರ ಮಾಡಿದ ಮಾತ್ರಕ್ಕೆ ಭಾರತ ಹಿಂದೂರಾಷ್ಟ್ರ ಆಗಿತ್ತು ಎಂಬ ಸತ್ಯ ಎಂದಿಗೂ ಬದಲಾಗಲ್ಲ. ಜತೆಗೆ ಭಾರತ ಇಸ್ಲಾಂಗಿಂತ ಹಳೆಯದು ಎಂದು ಹಿಗ್ಗಾಮುಗ್ಗಾ ತರಾಟೆ ಟ್ವೀಟ್ ಮೂಲಕ ತೆಗೆದುಕೊಂಡಿದ್ದಾರೆ.

ಮುಸ್ಲಿಂ ವಿದ್ವಾಂಸ ತಪರಾಕಿಗೆ ಪಾಕಿಸ್ತಾನ ಗಪ್‍ಚುಪ್ ಆಗಿದೆ. ಇಮಾಮ್ ಮಹಮ್ಮದ್ ತಾವ್ಹಿದಿ, ಹಿಂದಿನಿಂದಲೂ ಪಾಕಿಸ್ತಾನದಲ್ಲಿನ ಉಗ್ರವಾದವನ್ನು ವಿರೋಧಿಸುತ್ತಲೇ ಬಂದಿದ್ದು, ಪಾಕ್ ನಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕಿಸುತ್ತಲೇ ಬಂದಿದ್ದಾರೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software