Log in
  • ಮುಖಪುಟ
  • ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ, ಕೆಣಕಿದರೆ ಸುಮ್ಮನಿರಲ್ಲ: ಪಾಕಿಸ್ತಾನಕ್ಕೆ ರಾವತ್ ಎಚ್ಚರಿಕೆ

ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ, ಕೆಣಕಿದರೆ ಸುಮ್ಮನಿರಲ್ಲ: ಪಾಕಿಸ್ತಾನಕ್ಕೆ ರಾವತ್ ಎಚ್ಚರಿಕೆ

370 ವಿಧಿ ರದ್ದಿನ ಬಳಿಕ ಪಾಕ್ ಸೇನಾ ಅಧಿಕಾರಿಗಳು, ಸಚಿವರು ಸೇರಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಪದೇ ಪದೇ ಯುದ್ಧೋನ್ಮಾನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಲಡಾಖ್‍ನ ಸ್ಕರ್ದು ಪ್ರದೇಶದಲ್ಲಿ ಪಾಕ್ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದವು. ಈ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರತಿಕ್ರಿಯಿಸಿದ್ದು, ನಾವು ಎಂದಿಗೂ ಶಾಂತಿ ಸೌಹಾರ್ದತೆ ಬಯಸುತ್ತೇವೆ. ಆದರೆ ಪದೇ ಪದೇ ಗಡಿಯಲ್ಲಿ ತಂಟೆ ತೆಗೆದರೆ ನಾವು ಸುಮ್ಮನಿರುವ ಮಾತೆಯಿಲ್ಲ. ನಾವು ಎಲ್ಲದಕ್ಕೂ ಗಡಿಯಲ್ಲಿ ಸಿದ್ಧರಾಗಿದ್ದೇವೆ ಎಂದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

370 ವಿಧಿ ರದ್ದಿನ ಬಳಿಕ ಜಮ್ಮು- ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಯಾವುದೇ ಪ್ರತಿಭಟನೆಯಾಗಲಿ, ಹಿಂಸಾಚಾರವಾಗಲಿ ನಡೆದಿಲ್ಲ. ಆದರೂ ಪಾಕಿಸ್ತಾನ ಪದೇ ಪದೇ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಳೆದು ತರುತ್ತಿದೆ. ಜತೆಗೆ ಯುದ್ದೋನ್ಮಾನ ಹೇಳಿಕೆ ನೀಡುತ್ತಿದೆ. ಪಾಕ್ ನಿಂದ ಏನಾದರೂ ಒಂದು ಗುಂಡು ಹಾರಿದರೆ, ನಾವು ಸುಮ್ಮನಿರಲ್ಲ. ನಾವು ಸಿದ್ಧರಿದ್ದೇವೆ ಎಂದು ರಾವತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

1970 ಹಾಗೂ 80 ದಶಕದಲ್ಲೂ ಕಣಿವೆ ರಾಜ್ಯದ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೆವು. ಅಂದು ಕೂಡ ನಾವು ಸೇನೆ ನಿಯೋಜಿಸಿದ್ದೇವು. ಹೀಗಾಗಿ ಭಾರತೀಯ ಸೇನೆ ನಿಯೋಜನೆ ಬಗ್ಗೆ ಹೊಸ ಅರ್ಥ ಕಲ್ಪಿಸುವುದು ಬೇಡ ಎಂದರು. ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಎರಡು ರಾಷ್ಟ್ರಗಳಿಂದಲೂ ಹೆಚ್ಚುವರಿ ಸೇನೆ ನಿಯೋಜಿಸಲಾಗಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software