Log in
  • ಮುಖಪುಟ
  • ಔಷಧಕ್ಕಾಗಿ ಹಣ ಕೇಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್, ಇವರಿಗೆ ಇನ್ನೆಂತಹ ಕಾನೂನು ಬೇಕು?

ಔಷಧಕ್ಕಾಗಿ ಹಣ ಕೇಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್, ಇವರಿಗೆ ಇನ್ನೆಂತಹ ಕಾನೂನು ಬೇಕು?

ತ್ರಿವಳಿ ತಲಾಖ್ ಎಂಬ ಅನಿಷ್ಟದಿಂದ ಮುಸ್ಲಿಂ ಮಹಿಳೆಯರು ಹೊರಬರಬೇಕು ಎಂದು ತ್ರಿವಳಿ ತಲಾಖ್ ನೀಡಿದವರಿಗೆ ಶಿಕ್ಷೆ ನೀಡುವ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ತಂದರೂ, ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ತ್ರಿವಳಿ ತಲಾಖ್ ನೀಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹೆಂಡತಿಯು ಔಷಧಕ್ಕಾಗಿ 30 ರೂಪಾಯಿ ಕೇಳಿದಳು ಎಂದು ತ್ರಿವಳಿ ತಲಾಖ್ ನೀಡಿದ್ದಾನೆ.

ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಗಂಡ ತ್ರಿವಳಿ ತಲಾಖ್ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಮೂರು ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದೇನೆ. ಇತ್ತೀಚೆಗೆ ಹುಷಾರಿರಲಿಲ್ಲ. ಮಾತ್ರೆ ತೆಗೆದುಕೊಳ್ಳಬೇಕು 30 ರೂಪಾಯಿ ಕೊಡಿ ಎಂದು ಕೇಳಿದ್ದಕ್ಕೆ, ಜೋರಾಗಿ ಕೂಗಿ ತ್ರಿವಳಿ ತಲಾಖ್ ನೀಡಿದ್ದಾನೆ. ಬಳಿಕ ಅವರ ಕುಟುಂಬಸ್ಥರೆಲ್ಲರೂ ಸೇರಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣದ ಕುರಿತು ಹಾಪುರ ಡಿಎಸ್ ಪಿ, ಕೆಲವು ದಿನಗಳ ಹಿಂದೆ ಪತಿಯು ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಈಗ ದೂರು ನೀಡಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣಾ ಕಾಯ್ದೆ ಅನ್ವಯ ತ್ರಿವಳಿ ತಲಾಖ್ ನೀಡಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಷ್ಟಿದ್ದರೂ ತ್ರಿವಳಿ ತಲಾಖ್ ನೀಡುತ್ತಾರೆಂದರೆ, ಇವರಿಗೆ ಇನ್ನೆಂತಹ ಕಾನೂನು ಬರಬೇಕು?

This forum is empty.


Copyright © 2019-20 Vikrama. All rights reserved. 

Powered by Wild Apricot Membership Software