Log in
  • ಮುಖಪುಟ
  • ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಅನಾವರಣವಾಗಿದ್ದು ಮೋದಿ ಅವರ ಮತ್ತೊಂದು ವ್ಯಕ್ತಿತ್ವ

ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಅನಾವರಣವಾಗಿದ್ದು ಮೋದಿ ಅವರ ಮತ್ತೊಂದು ವ್ಯಕ್ತಿತ್ವ

ಇದುವರೆಗೆ ನರೇಂದ್ರ ಮೋದಿ ಅವರೆಂದರೆ ಕೆಲಸ, ಅಭಿವೃದ್ಧಿ, ಮೋಡಿ ಮಾಡುವ ಮಾತು, ವಿದೇಶ ಸಂಚಾರ, ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ದುಡಿಯುವುದು, ದೇಶಪ್ರೇಮ, ಚಾಣಾಕ್ಷತನ, ಪ್ರಾಮಾಣಿಕತೆ, ಸ್ನೇಹಜೀವನ... ಹೀಗೆ ಬಹುತೇಕ ವಿಷಯ ಗೊತ್ತಿದ್ದವು. ಆದರೆ, ಅವರು ಅಷ್ಟೊಂದು ಪರಿಸರ ಪ್ರೇಮಿ, ಅಡ್ವೆಂಚರ್ ಇಷ್ಟಪಡುವವರು ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಸಾಹಸಿಗ ಬೇರ್ ಗ್ರಿಲ್ ಜತೆ ನಡೆದ ಮ್ಯಾನ್ ವರ್ಸಸ್ ವೈಲ್ಡ್ ಸಾಹಸ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಕುರಿತು ಹಲವು ವಿಚಾರಗಳು ಬಹಿರಂಗವಾಗಿವೆ.

ನನಗೆ ಚಿಕ್ಕಂದಿನಿಂದಲೂ ಪರಿಸರದ ಕುರಿತು ಎಲ್ಲಿಲ್ಲದ ಆಸಕ್ತಿ ಇತ್ತು. ನನ್ನ ಪ್ರಕಾರ ದೇಶದಲ್ಲಿರುವ ಪ್ರತಿಯೊಂದು ಮರವೂ ದೇವರೇ. ನಾನು ಚಿಕ್ಕವನಾಗಿದ್ದಾಗ ಕೆರೆಯೊಂದರಲ್ಲಿ ಈಜಾಡಬೇಕಿದ್ದರೆ, ಮೊಸಳೆಯ ಮರಿಯೊಂದು ಸಿಕ್ಕಿತ್ತು. ಅದನ್ನು ಮನೆಗೂ ತಂದಿದ್ದೆ. 17ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹಿಮಾಲಯಕ್ಕೆ ಹೋದರೆ, ಅಲ್ಲಿನ ಪ್ರಕೃತಿ ಇಷ್ಟವಾಯಿತು. ಇಡೀ ಜಗತ್ತನ್ನು ತಿಳಿಯಬೇಕು, ಪರಿಸರದ ಕುರಿತು ತಿಳಿಯಬೇಕು ಎಂದು ಮೋದಿ ಹೇಳಿರುವುದು ಅವರ ಪರಿಸರ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಅಷ್ಟೇ ಅಲ್ಲ, ಗ್ರಿಲ್ಸ್ ಜತೆ ನಡೆದ ಸಾಹಸ ಕಾರ್ಯಕ್ರಮದಲ್ಲಿ ಮೋದಿ ಅವರು ಹಲವು ವಿಷಯ ಪ್ರಸ್ತಾಪಿಸಿದ್ದು, ಅವುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ನನ್ನ ಇಡೀ ಜೀವನದಲ್ಲಿ ಇದುವರೆಗೂ ಯಾರಿಗೂ ಹೆದರಿಲ್ಲ, ಭಯ, ಭೀತಿ ಎಂಬುದರ ಅರ್ಥವೇ ನನಗೆ ಗೊತ್ತಿಲ್ಲ

• ನನ್ನ ಜೀವನವನ್ನು ರೂಪಿಸಿದ್ದೇ ಕೆಲಸವಾಗಿರುವುದರಿಂದ ಕೆಲಸದ ಹೊರತಾಗಿ ಬೇರೇನನ್ನೂ ಯೋಚಿಸಲಾರೆ

• ಕಳೆದ 18 ವರ್ಷಗಳಲ್ಲಿ ನಾನು ಇದೇ ಮೊದಲ ಬಾರಿಗೆ ಬಿಡುವು ಮಾಡಿಕೊಂಡಿದ್ದೇನೆ, ಪ್ರವಾಸಕ್ಕೆ ಬಂದಿದ್ದೇನೆ

• ನಾವು ಪರಿಸರವನ್ನು ಸ್ವಾರ್ಥಕ್ಕಾಗಿ ಹಾನಿ ಮಾಡುತ್ತಿದ್ದೇವೆ, ಇನ್ನಾದರೂ ಪರಿಸರ ರಕ್ಷಣೆಗೆ ಪಣ ತೊಡಬೇಕು

• ಪರಿಸರ ಕುರಿತ ಕಾಳಜಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ

• ನಾವು ನಿಸರ್ಗದೊಂದಿಗೆ ಸೌಹಾರ್ದದಿಂದ ಇದ್ದರೆ ಮಾನವನ ಅಸ್ತಿತ್ವಕ್ಕೆ ಯಾವ ಭೀತಿಯೂ ಇರುವುದಿಲ್ಲ

• ಕಾಡಿನಲ್ಲಿ ನಿಮ್ಮ (ಗ್ರಿಲ್ಸ್) ಜತೆ ಕಳೆದಿದ್ದು ಅದ್ಭುತ ಅನುಭವ, ನಿಸರ್ಗದ ಭಾಷೆ ನನಗೆ ಅರಿವಾಯಿತು

• ನರೇಂದ್ರ ಮೋದಿ ಅವರೇ ನೀವು ಭಾರತದ ಘನತೆಯ ವ್ಯಕ್ತಿ, ನಿಮ್ಮನ್ನು ಕಾಪಾಡುವುದು ನನ್ನ ಕರ್ತವ್ಯ: ಗ್ರಿಲ್ಸ್

• ನರೇಂದ್ರ ಮೋದಿ ಅವರಿಗೆ ನೆಗಡಿಯಾಗಿದೆ, ಅವರು ಮಳೆಯಲ್ಲಿ ನೆನೆದಿದ್ದಾರೆ, ಆದರೂ ಹೀರೋ ರೀತಿ ಇದ್ದಾರೆ: ಬೇರ್ ಗ್ರಿಲ್ಸ್ ಮೆಚ್ಚುಗೆ

This forum is empty.


Copyright © 2019-20 Vikrama. All rights reserved. 

Powered by Wild Apricot Membership Software