Log in

ವಿಕ್ರಮದ ನೂತನ ಅಭಿಯಾನಕ್ಕೆ ಹೊರಡೋಣ !

ವೃಷಾಂಕ ಭಟ್, ಸಂಪಾದಕೀಯ

ಡಾ.ಕೇಶವ್ ಬಲಿರಾಮ್ ಅವರು ಮೂಲ ಚಿಂತನೆಗಳಲ್ಲಿ ಮೂರು ಪ್ರಮುಖವಾದವುಗಳು.

1) ಹಿಂದು ಸಂಘಟನೆ

2) ವೈಚಾರಿಕ ಜಾಗೃತಿ

3) ವ್ಯಕ್ತಿತ್ವ ನಿರ್ಮಾಣ

ಹಿಂದು ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ವೈಚಾರಿಕ ಜಾಗೃತಿಯ ಜವಾಬ್ದಾರಿ ಇರುವುದು ಪತ್ರಿಕೆಗಳು ಮತ್ತು ಕೃತಿಗಳ ಹೆಗಲ ಮೇಲೆ. ಈ ಉದ್ದೇಶದಿಂದಲೇ 1948ರ ವಿಜಯದಶಮಿಯಂದು ವಿಕ್ರಮ ವಾರಪತ್ರಿಕೆ ಸ್ಥಾಪನೆಯಾಯಿತು. 71 ವರ್ಷಗಳನ್ನು ಮುಗಿಸಿ 72ನೇ ವರ್ಷಕ್ಕೆ ಕಾಲಿಟ್ಟಿರುವ ವಿಕ್ರಮ ವೈಚಾರಿಕ ಜಾಗೃತಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ದಿನಪತ್ರಿಕೆ ತಲುಪದ ಹಳ್ಳಿಗಳನ್ನು ವಾರಕ್ಕೊಮ್ಮೆ ಅಂಚೆ ಮೂಲಕ ತಲುಪುವ ವಿಕ್ರಮ ರಾಷ್ಟ್ರೀಯ ವಿಚಾರಗಳನ್ನು ತಲುಪಿಸುತ್ತಿದೆ.

ವರ್ತಮಾನದಲ್ಲಿ ವಿಕ್ರಮ ಪತ್ರಿಕೆಯು ಜನರನ್ನು ಮತ್ತಷ್ಟು ತಲುಪುವ ಉದ್ದೇಶದಿಂದ ಚಂದಾದಾರರ ಸಂಖ್ಯೆ ಹೆಚ್ಚಿಸುವ ಜೊತೆಜೊತೆಗೆ ಸಾಮಾಜಿಕ ಜಾಲತಾಣ ಮತ್ತು ವೆಬ್‌ಸೈಟ್ ಮೂಲಕ ಇಂಟರ್ನೆಟ್ ಬಳಕೆದಾರರನ್ನೂ ತಲುಪಲು ನಿರ್ಧರಿಸಲಾಗಿದೆ. 

ವಿಕ್ರಮದ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪೇಜ್ ತೆರೆಯಲಾಗಿದೆ. ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರತಿವಾರದ ಸಂಚಿಕೆಯ ಪಿಡಿಎಫ್ ಮತ್ತು ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು ಮತ್ತು ಅದಕ್ಕೆ 500 ರೂ.ಗಳ ವಾರ್ಷಿಕ ಚಂದಾ ನಿಗದಿ ಮಾಡಲಾಗಿತ್ತು. ಆದರೆ ಇನ್ನುಮುಂದೆ ವಿಕ್ರಮ ವೆಬ್‌ಸೈಟ್‌ನಲ್ಲಿ ಲೇಖನಗಳನ್ನು ಓದಲು ಯಾವುದೇ ಹಣ ನೀಡಬೇಕಾಗಿಲ್ಲ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ. ಪತ್ರಿಕೆಯಲ್ಲಿ ಮುದ್ರಿತವಾದ ಲೇಖನಗಳು ಮಾತ್ರವಲ್ಲದೆ, ಪ್ರತಿದಿನದ ಸುದ್ದಿಗಳನ್ನೂ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. 

ರಿಯಲ್‌ಟೈಮ್ ರಾಷ್ಟ್ರೀಯ ಸುದ್ದಿಗಳನ್ನು ವಿಕ್ರಮದ ಓದುಗರು ವಿಕ್ರಮ ವೆವ್‌ಸೈಟ್‌ನಲ್ಲಿ ಓದಬಹುದು. ಅಷ್ಟೇ ಅಲ್ಲದೆ ಈಗಾಗಲೇ ತೆರೆಯಲಾಗಿರುವ ವಿಕ್ರಮ ಫೇಸ್‌ಬುಕ್ ಪೇಜಿನಲ್ಲಿಯೂ ಸಹ ರಿಯಲ್ ಟೈಮ್ ಸುದ್ದಿಗಳನ್ನು ಹಾಕಲಾಗುವುದು. ಇದರೊಂದಿಗೇ, ಪೋಸ್ಟರ್, ವೀಡಿಯೋ ಸಾಮಗ್ರಿಗಳನ್ನೂ ವಿಕ್ರಮ ಲೋಗೋ ಅಡಿಯಲ್ಲಿ ತಯಾರಿಸಲಾಗುವುದು.

ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ ವಿಕ್ರಮ ಪತ್ರಿಕೆಯ ವಿನ್ಯಾಸದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಏಕತಾನತೆಯನ್ನು ತೊಡೆದು ಹಾಕುವ ಉದ್ದೇಶ ಮತ್ತು ವಿಭಿನ್ನತೆ ತರುವ ಇಚ್ಛೆ ಇದರ ಹಿಂದಿದೆ. ವಿನ್ಯಾಸದ ಬದಲಾವಣೆ ಓದುಗರಿಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ಒಂದುವೇಳೆ ಬೇರೆ ಸಲಹೆಗಳು ತಮ್ಮ ಬಳಿಯಿದ್ದರೆ ಪತ್ರ/ಫೋನ್/ಇ-ಮೇಲ್ ಮೂಲಕ ನಮಗೆ ತಿಳಿಸಬಹುದು.

ಹಿಂದಿನ ಧ್ಯೇಯ ಮತ್ತು ಹೊಸ ಉತ್ಸಾಹದೊಂದಿಗೆ ನವ ಸಂಪುಟವನ್ನು ಸ್ವಾಗತಿಸೋಣ.


This forum is empty.


Copyright © 2019-20 Vikrama. All rights reserved. 

Powered by Wild Apricot Membership Software